ಕೊಪ ನಿಯಂತ್ರಿಸುವ ಬಗೆ
ಮನುಷ್ಯನ ಕೋಪದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಾಗ, ವ್ಯವಹರಿಸುವಾಗ, ಕೋಪ ನಿಗ್ರಹಿಸುವ ತಂತ್ರಗಳಿಗೆ ಹಲವು ಸಲಹೆಗಳಿವೆ. ಅದರಲ್ಲೂ ಶೀಘ್ರವಾಗಿ ಆಗಾಗ್ಗೆ ಕೋಪಗೊಳ್ಳುವ ಜನರಿಗೆ ಸಹಾಯ ಮಾಡಲು ಯೋಜಿಸಲಾಗಿದೆ. ಕೋಪ, ಅಸಮಾಧಾನದ ಸಂದರ್ಭಗಳಿಗೆ ಆರೋಗ್ಯಕರ ಮತ್ತು ಸಾಮಾನ್ಯ ಪ್ರತಿಕ್ರಿಯೆಯಾಗಿದ್ದರೂ, ಅದು ಹಿಂಸೆಯ ಹಂತಕ್ಕೆ ತಿರುಗುವಷ್ಟು ತೀವ್ರವಾಗಿದ್ದರೆ. ಒಬ್ಬ ವ್ಯಕ್ತಿಯು ಕೋಪಗೊಂಡು ತನ್ನ ವರ್ತನೆಯನ್ನು ತಿದ್ದಿ ಕೊಳ್ಳದೆ ಹೊದರೆ, ಖಂಡಿತ ಸಮಸ್ಯೆ ಯಾಗುತ್ತದೆ, ಕೋಪವನ್ನು ನಿಯಂತ್ರಿಸುವ. ವ್ಯಕ್ತಿಯು ಆರೋಗ್ಯಕರ, ಸಾಮಾನ್ಯ ಜೀವನಕ್ಕೆ ಮರಳಲು ಸಹಕಾರಿಯಾಗಿ ಈ ಕೋಪ ನಿರ್ವಹಣಾ ತಂತ್ರಗಳನ್ನು ವಿನ್ಯಾಸಗೊಳಿಸಲಾಗಿದೆ.
ಆರೋಗ್ಯಕರ ಜೀವನಕ್ಕೆ ಶೀಘ್ರವಾಗಿ ಕೋಪಿಸಿಕೊಳ್ಳದೆ ಮನಸ್ಸನ್ನು ಶಾಂತಿಯುತ ವಾಗಿ ಇಟ್ಟು ಕೊಳ್ಳಬೇಕು.ಯಾವೊದು ಒಬ್ಬ ವ್ಯಕ್ತಿ ಯಿಂದಾಗಿ ನಮಗೆ ಶೀಘ್ರವಾಗಿ ಕೋಪ ಬರುತ್ತದೆ ಎಂದಾದರೆ ಅಂತಹ ಪರಿಸ್ಥಿತಿ ಅಥವಾ ವ್ಯಕ್ತಿಯಿಂದ ತನ್ನನ್ನು ತಾನೇ ನಿಯಂತ್ರಿಸಿ,ಇಲ್ಲವೇ ಒಂದಷ್ ಸಮಯ ಮೀರುವ ತನಕ ಕಾಯಿರಿ. ಆಗಾಗ ಒಂದು ಲಾಂಗ್ ಡ್ರೈವ್ ಕಾರಿನಲ್ಲಿ ಅಥವಾ ಬೈಕಿನಲ್ಲಿ ಸವಾರಿ ಮಾಡಿ, ಅಥವಾ ಕಡಲತೀರದ, ನದಿ,ಬೆಟ್ಟ,ಇಲ್ಲವೇ ನಿಮ್ಮದೇ ತೋಟದ ಕಡೆಗೆ ನಡೆದಾಡಿ ಪ್ರಕೃತಿಯಲ್ಲಿ ನಲಿಯಿರಿ, ಕ್ರೀಡೆಗಳನ್ನು ಆಡುವುದು ಅಥವಾ ಕ್ರಿಯಾಶೀಲವಾಗಿ ಚಟುವಟಿಕೆಗಳನ್ನು ಮಾಡುವುದು. ಇದೆಲ್ಲವೂ ಮನುಷ್ಯನ ಮನಸ್ಸನ್ನು ಪ್ರಶಾಂತವಾಗಿಸಿಲು ಸಹಾಯ ಮಾಡುತ್ತದೆ. ಇದಲ್ಲದೇ ಇತರ ಕೆಲವು ಸಲಹೆಗಳೆಂದರೆ ಓದುವುದು, ಸಂಗೀತ ಕೇಳುವುದು ಅಥವಾ ಮೌನವಾಗಿ ಏಕಾಂಗಿಯಾಗಿ ಧ್ಯಾನದಲ್ಲಿ ಕುಳಿತುಕೊಳ್ಳುವುದು. ಈ ಪ್ರತಿಯೊಂದು ಚಟುವಟಿಕೆಗಳು ಮನುಷ್ಯನ ಕೋಪ ನಿಯಂತ್ರಿಸುವ ತಂತ್ರಗಳಾಗಿವೆ.
Comments
Post a Comment